ಕೂಡ್ಲಿಗಿ; ಅಧುನಿಕ ಭರಾಟೆಗಳ ನಡುವೆ ನಾಟಕಕಗಳು ಕಣ್ಮರೆಯಾಗುತ್ತಿರುವುದು ವಿಷಾದದ ಸಂಗತಿಯಾಗಿದ್ದು, ಸಮಾಜದಲ್ಲಿ ಶಾಂತಿ, ಸಮಾನತೆ ಪಾಠವನ್ನು ರಂಗಭೂಮಿ ಮಾಧ್ಯಮದಿಂದ ಕಲಿಸಿಕೊಡಬೇಕದ ಅನಿವಾರ್ಯತೆ ಇದೆ ಎಂದು ಶರಣೇಶ್ವರ ವಿದ್ಯಾಸಂಸ್ಥೆಯ ಸಂಸ್ಥಾಪಕ ಕೆ ಎಂ ಶಶಿಧರ ಸ್ವಾಮಿ ಹೇಳಿದರು.
ತಾಲೂಕಿನ ಕಾನಹೊಸಹಳ್ಳಿಯ ವಿದ್ಯಾನಿಕೇತನ ಪ್ರಾಥಮಿಕ/ಪ್ರೌಢಶಾಲಾ ಆವರಣದಲ್ಲಿ ಸೋಮವಾರ ನಿನಾಸಂ(ನಿಲಕAಠೇಶ್ವರ ನಾಟ್ಯಸೇವಾ ಸಂಘ) ಸಹಯೋಗದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆದ “ಹೃದಯದ ತೀರ್ಪು” ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಲಾವಿದರಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಮ್ಮ ಸಂಸ್ಥೆ ಸದಾ ಪ್ರೋತ್ಸಾಹಿಸುತ್ತ ಬಂದಿದ್ದು, ನೀನಾಸಂ ನಾಟಕಗಳು ಮೌಲ್ಯಯುತ ಜೀವನಕ್ಕೆ ಮಾದರಿಯಾಗಿವೆ. ಇಂತಹ ಕಾರ್ಯಕ್ರಮಗಳನು ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದ ಅವರು, ನೀನಾಸಂ ಕೇವಲ ರಂಗ ಪ್ರದರ್ಶನಕ್ಕೆ ಸೀಮಿತವಾಗದೆ ಕಲಾ ಶಿಕ್ಷಣದಲ್ಲಿ ತೊಡಗಿಸಿಕೊಂಡು. ಗ್ರಾಮೀಣ ಭಾಗಗಳಲ್ಲಿಯೂ ನಾಟಕಕಗಳ ತಲುಪಿಸುವ ಮೂಲಕ ಪ್ರಯೋಗತ್ಮಕ ನಾಟಕಗಳಿಂದ ಸಮಾಜಕ್ಕೆ ಸಂದೇಶ ನೀಡುತ್ತಿದೆ ಎಂದರು.
ಸAಸ್ಥೆಯ ಕಾರ್ಯದರ್ಶಿ ಹರ್ಷವರ್ಧನ್ ಬಹುತೇಕ ಕಿರುತೆರೆ ಹಾಗೂ ಸಿನಿಮಾ ನಟರು ನೀನಾಸಂನಿAದ ಬಂದವರಾಗಿದ್ದು, ಮಹಾನ್ ಕಲಾವಿದರನ್ನು ಆ ಸಂಸ್ಥೆ ಹುಟ್ಟುಹಾಕಿದೆ. ನಾಡಿನಲ್ಲಿ ಪ್ರಖ್ಯಾತಿ ಪಡೆದಿರುವ ಸಂಸ್ಥೆಯು ನಮ್ಮಲ್ಲಿ ಕಾರ್ಯಕ್ರಮ ನೀಡುತ್ತಿರುವುದು ಖಷಿಯ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ, ನಿರ್ದೇಶಕರಾದ ನಿರ್ಮಲಾ ಕೆ.ಎಂ ಬೀರಪ್ಪ ನೀನಾಸಂ, ಐಶ್ವರ್ಯ ನೀನಾಸಂ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್ ವಿಶ್ವೇಶ್ವರ ಸಜ್ಜನ್, ಮುಖಂಡರಾದ ನಿವೃತ್ತ ಪ್ರಾಶುಂಪಾಲರಾದ ಹೆಚ್ ಪ್ರಕಾಶ್, ಗ್ಯಾರೇಜ್ ಸ್ವಾಮಿ, ಸೂರ್ಯಪ್ರಕಾಶ್, ತಳವಾರ ಶರಣಪ್ಪ, ಎಎಸ್ಐ ಜಿಲಾನ್ ಭಾಷಾ, ಐಟಿಐ ಕಾಲೇಜು ಪ್ರಾಂಶುಪಾಲರಾದ ಸಿದ್ದಾಪುರ ನಾಗೇಶ್, ಶಿಕ್ಷಕರಾದ ಶಹಜೀದಾ, ನಾಗರಾಜ್, ತ್ರಿವೇಣಿ, ಸುವರ್ಣಮ್ಮ, ಪವಿತ್ರಾ, ನಂದಿನಿ, ಚನ್ನವೀರಸ್ವಾಮಿ, ದಂಡ್ದೆಪ್ಪ ಇತರರಿದ್ದರು.
Trending
- ಆರೋಗ್ಯ ಸೇವೆಗಳ ಸದುಪಯೋಗಪಡೆಸಿಕೊಳ್ಳಲು ಕರೆ
- ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇನ್ನಿಲ್ಲ
- ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ; 50ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳಿಗೆ ಬೆಂಕಿ
- ಪತ್ರಕರ್ತರ ಗಿರೀಶ್ ಕುಮಾರ್.ಜಿ ಗೆ ಡಾಕ್ಟರೇಟ್ ಪದವಿ
- ರಂಗಭೂಮಿ ಮಾಧ್ಯಮದಿಂದ ಶಾಂತಿ, ಸಮಾನತೆ ಪಾಠದ ಅನಿವಾರ್ಯತೆ
- ನಾಳೆ ಕೂಡ್ಲಿಗಿಗೆ ಸಿಎಂ, ಡಿಸಿಎಂ
- ಕಾನಹೊಸಹಳ್ಳಿಯಲ್ಲಿ ನಾಳೆ ಮತ್ತು ನಾಡಿದ್ದು ನೀನಾಸಂನಿಂದ ನಾಟಕೋತ್ಸವ
- ಕಾನಾಮಡುಗು ಗ್ರಾಮದಲ್ಲಿ ನೀರಿನಲ್ಲಿಯೇ ಶವ ಸಂಸ್ಕಾರ

