ಕೂಡ್ಲಿಗಿ ಕ್ಷೇತ್ರದ ಜನತೆಯ ಬಹುದಶಕಗಳ ಬೇಡಿಕೆಯಾದ ೭೪ ಕೆರೆಗಳ ನೀರು ತುಂಬಿಸುವ ಐತಿಹಾಸಿಕ ಕಾರ್ಯಕ್ರಮಕ್ಕೆ ಕೂಡ್ಲಿಗಿ ಪಟ್ಟಣ ನಾಳೆ ಸಾಕ್ಷಿಯಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರು ತುಂಬಿಸುವ ಯೋಜನೆಗೆ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಉಸ್ತುವಾರಿ ಸಚಿವರಾದ ಬಿ ಝಡ್ ಜಮೀರ್ ಅಹ್ಮದ್ ಖಾನ್ ಆಗಮಿಸಲಿದ್ದಾರೆ. ಕೂಡ್ಲಿಗಿಯ ಶಾಸಕ ಡಾ ಎನ್ ಟಿ ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮೊಳಕಾಲ್ಮೂರು ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ವಿಶೇಷ ಅತಿಥ್ಯ ವಹಿಸಲಿದ್ದಾರೆ. ಬಳ್ಳಾರಿ-ವಿಜಯನಗರ ಸಂಸದ ಈ ತುಕರಾಂ, ಅಖಂಡ ಜಿಲ್ಲೆಯ ಶಾಸಕರು ಸೇರಿದಂತೆ ಹಲವು ಸಚಿವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಬಹು ನಿರೀಕ್ಷಿತ ೭೪ ಕೆರೆಗಳ ತುಂಬಿಸುವ ಯೋಜನೆಗೆ ೭೪೦ ಕೋಟಿ ರೂ ವೆಚ್ಚದಲ್ಲಿ ಅಂದಿನ ಶಾಸಕ ಎನ್ ವೈ ಗೋಪಾಲಕೃಷ್ಣ ೨೦೨೧ರಂದು ಜಾರಿಗೆ ತಂದಿದ್ದರು. ಬಹುತೇಖ ಅರ್ಧ ಪ್ರಮಾಣದಲ್ಲಿ ಪೈಪ್‌ಲೈನ್ ಕಾಮಗಾರಿಯೂ ಸಹ ಮುಗಿದಿತ್ತು, ೨೦೨೩ ರ ಚುನಾವಣೆಯ ನಂತರ ರೈತರ ಜಮೀನುಗಳು, ವನ್ಯ ಜೀವಿ ಅರಣ್ಯ, ಕಾಯ್ದಿಟ್ಟ ಅರಣ್ಯ ಕಾಮಗಾರಿಗೆ ಅಡ್ಡಿಯಾಗಿದ್ದವು. ಕ್ಷೇತ್ರದ ಹಾಲಿ ಶಾಸಕ ಡಾ ಶ್ರೀನಿವಾಸ್ ಎನ್ ಟಿ ಅವರು ವಿಶೇಷ ಮುತೃವರ್ಜಿವಹಿಸಿ ಎದುರಾದ ಸಮಸ್ಯೆಗಳನ್ನು ಬಗೆಹರಿಸಿ ಕೆರೆಗಳಿಗೆ ನೀರು ಹರಿಸಲು ಕಾಳಜಿವಹಿಸುವ ಮೂಲಕ ಬರದ ನಾಡಿಗೆ ಗಂಗೆ ಹರಿಸಿದ್ದಾರೆ.
ಕೆರೆ ತುಂಬಿಸುವ ಯೋಜನೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿ ಮುಂಭಾಗ ಬೃಹತ್ ವೇದಿಕೆ ಸಿದ್ದಗೊಂಡಿದ್ದು, ಯಾವುದೇ ಅಡೆ-ತಡೆಯಾಗದಂತೆ ಸೂಕ್ತ ಬಂದೋಬಸ್ತ್ ಸೇರಿದಂತೆ ಅಧಿಕಾರಿಗಳು ಸನ್ನದರಾಗಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಕ್ಷೇತ್ರದ ನಾಗರಿಕರಿಗೆ ೬೦೦ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
((ಕೋಟ್))
ಕ್ಷೇತ್ರದ ಜನತೆಯ ಹಿತದೃಷ್ಠಿಯಿಂದ ಹೆಚ್ಚಿನ ಕಾಳಜಿವಹಿಸಿ ೭೪ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಳಿಸಿದ್ದೇನೆ, ಸಿಎಂ, ಡಿಸಿಎಂ ಶಂಕುಸ್ಥಾಪನೆ ಮಾಡುವುದು ಸಂತಸ ಇಮ್ಮಡಿಗೊಳಿಸಿದೆ.
-ಡಾ ಶ್ರೀನಿವಾಸ್ ಎನ್.ಟಿ, ಶಾಸಕ, ಕೂಡ್ಲಿಗಿ

