ಕೂಡ್ಲಿಗಿ; ತಾಲೂಕಿನ ಮೂಲಕಟ್ಟಿನ ಓಬಳಶೆಟ್ಟಿಹಳ್ಳಿ ಗ್ರಾಮದ ಗ್ರಾಮೀಣ ಪ್ರದೇಶದಲ್ಲಿನ ಸಾವಿರಾರು ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಮಾಡಿದ್ದ ಸೈ ಎನ್ನಿಸಿಕೊಂಡಿದ್ದ ಶತಾಯುಷಿ ಸೂಲಗಿತಿ ಈರಮ್ಮಗೆ ೨೦೨೫-೨೬ ಸಾಲಿನಲ್ಲಿ ರಾಜ್ಯ ಸರ್ಕಾರ ಕೊಡುವ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಈರಮ್ಮಾಜ್ಜಿಯ ಸುಮಾರು ೭೦ ವರ್ಷಗಳಿಂದ ಸಾವಿರಾರು ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಮಾಡಿಸಿದ ಕೀರ್ತಿ ಈ ಅಜ್ಜಿಗೆ ಇದೆ. ಇಂತಹ ಶತಾಯಷಿ ಈರಮ್ಮಜ್ಜಿಗೆ ಕೊನೆಗಾಲದಲ್ಲಿ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುವುದು ಅಜ್ಜಿಯ ಸೇವೆಗೆ ಮನ್ನಣೆ ಗೌರವ ಸಿಕ್ಕಿದೆ.
ಸೂಲಗಿತ್ತಿ ಈರಮ್ಮಾಜ್ಜಿಗೆ ಈಗ ೧೦೩ವರ್ಷ ತುಂಬಿದೆ. ೩೦ನೇ ವಯಸ್ಸಿನಿಂದ ಗರ್ಭಿಣೆ ಮಹಿಳೆಯರಿಗೆ ಹೆರಿಗೆ ಕಾಯಕ ಪ್ರಾರಂಭಿಸಿದ್ದ ಅಜ್ಜಿ, ನಿರಂತರವಾಗಿ ೭೦ವರ್ಷಗಳ ಕಾಲ ಸೇವೆ ಮಾಡುವ ಮೂಲಕ ಸಾವಿರಾರು ಮಹಿಳೆಯರ ಬಾಳಿಗೆ ಬೆಳಕಾದವಳು. ಅಜ್ಜಿಯ ಜೀವತಾಧಿಯಲ್ಲಿ ಸರಿಸುಮಾರು ೮ರಿಂದ ೧೦ಸಾವಿರದ ವರಿಗೆ ಹೆರಿಗೆ ಮಾಡಿಸಿ, ಎಲೆ ಮರೆಯ ಕಾಯಿಯಂತೆ ಜೀವಿಸುತ್ತಿರುವ ಸೂಲಗಿತ್ತಿ ಈರಮ್ಮ ನಮ್ಮ ನಡುವಿನ ಆದರ್ಶವಾಗಿ ಜೀವಿಸುತ್ತಿದ್ದಾಳೆ.
ಅನಕ್ಷರಸ್ಥೆಯಾಗಿರುವ ಈ ಅಜ್ಜಿ ವೈದ್ಯರಿಗೆ ಸವಾಲು ಸೂಲಗಿತ್ತಿ ಕಾಯಕವನ್ನು ಸಹವಾದ ಹೆರಿಗೆ ಮಾಡುವ ಮತ್ತು ಬಾಣಂತಿ ಮಗುವಿನ ಆರೈಕೆಯ ಸೇವೆ ಅನನ್ಯವಾದ್ದು
ಅಕ್ಷರ ಜ್ಞಾನವೂ ಇಲ್ಲದ ಈ ಅಜ್ಜಿ ಹೆರಿಗೆ ಸೇವೆ ಸೀಮಿತವಾಗದೆ, ಕಣ್ಣುಗಳಲ್ಲಿ ಬಿದ್ದ ಕಸ, ಧೂಳು ಮತ್ತು ಸಣ್ಣ ಹರಳು ಕೊಳವೆಯ ತೆಗೆಯುವುದು ಜತಗೆ ಬುಟ್ಟಿ ನೇಯುವುದು ಕಾಯಕ. ಕಳೆದ ೩ವರ್ಷದಿಂದ ಹೆರಿಗೆ ಮಾಡಿಸುವುದಕ್ಕೆ ವಿರಾಮ ನೀಡಿದ್ದು, ಮಗನ ಜತೆಯಲ್ಲಿ ವೃದ್ಯಾಪೆ ಜೀವನ ಮಾಡುತ್ತಾಳೆ.
ಅಜ್ಜಿಗೆ ೩೬ವರ್ಷದ ಪ್ರಾಯದಲ್ಲಿ ಗಂಡ ಮೃತರಾಗಿದ್ದಾರೆ. ಅಲ್ಲದೆ, ಓರ್ವ ಪುತ್ರ, ೨ಹೆಣ್ಣು ಮಕ್ಕಳು ಇದ್ದು, ಒಬ್ಬ ಮಗಳು ಸಹ ಮೃತಪಟ್ಟಿದ್ದಾಳೆ. ವೃದ್ಯಾಪೆ ವೇತನ ಪಡೆಯುತ್ತಿದ್ದಾನೆ ಬಿಟ್ಟರೆ ಯಾವುದೇ ಸೌಲಭ್ಯ ಸಿಕ್ಕಿಲ್ಲ ಈಗ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಮನೆಯಲ್ಲಿ ಸಂತಸಕ್ಕೆ ಕಾರಣವಾಗಿದೆ.
ದಿನದಲ್ಲಿ ಮೂರು ನಾಲ್ಕು ಹೆರಿಗೆ ಮಾಡಿಸಿರುವ ಅಜ್ಜಿ ನಿರಂತರ ಹೆರಿಗೆ ಸೇವೆ ದಿನಗಳಲಿ ಒಂದು ಜೀವವು ಬಲಿಯಾಗಿಲ್ಲ. ಹೆರಿಗೆ ಮಧ್ಯರಾತ್ರಿ ಬಂದು ಕರೆದರೂ ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಹೋಗಿ ಸೇವೆ ಮಾಡಿದ ಖ್ಯಾತಿ ಅಜ್ಜಿದು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

