ಕೂಡ್ಲಿಗಿ; ತಾಲೂಕಿನ ಹುಲಿಕೆರೆಯಲ್ಲಿ ರಸ್ತೆ ಅಭಿವೃದ್ದಿ ಹೆಸರನಲ್ಲಿ ನಡೆಸುತ್ತಿರುವ ಕಾಮಗಾರಿ ಮೂಲಕ ಕೆರೆ ಕೋಡಿಯ ಎತ್ತರವನ್ನು ತಗಿಸುತ್ತಿದ್ದು ಯಥಾಸ್ಥಿತಿ ಕಾಪಾಡುವಂತೆ ಗ್ರಾಮಸ್ಥರು ಬುಧವಾರ ಒತ್ತಾಯಿಸಿದರು.
ಕೆರೆ ಕೋಡಿ ಬಳಿ ನಡೆಯುತ್ತಿರುವ ದುರಸ್ಥಿ ಕಾರ್ಯದ ಸ್ಥಳದಲ್ಲಿ ನೆರೆದ ಗ್ರಾಮಸ್ಥರು ಸುದ್ದಿಗಾರರ ಜತೆ ಮಾತನಾಡಿದರು, ದುರಸ್ತಿ ಕಾರ್ಯದ ಮೂಲಕ ಕೆರೆಯ ಕೋಡಿಯ ಎತ್ತರವನ್ನು 1 ಅಡಿಗು ಅಧಿಕ ತಗ್ಗಿಸಲು ಅಗೆದಿದ್ದು, ಅವೈಜ್ಞಾನಿಕ ಕಾಮಗಾರಿಗೆ ಮುಂದಗಿದ್ದಾರೆ. ಬ್ರಿಟಿಷರ ಕಾಲದಲ್ಲಿದ್ದ ತಡೆಗೊಡೆಗಳನ್ನು ಆಗೆದಿದ್ದು, ಕಬ್ಬಿಣವಿಲ್ಲದೇ ನೇರವಾಗಿ ಕಾಂಕ್ರಿಟ್ ಹಾಕುತ್ತಿದ್ದಾರೆ, ಕಳಪೆ ಕಾಮಗಾರಿ ಮಾಡುವ ಮೂಲಕ ನಮ್ಮ ಕೆರೆಯನ್ನು ನಾಶ ಮಾಡಲು ಹೊರಟ್ಟಿದ್ದಾರೆ ಎಂದು ಗ್ರಾಮಸ್ತರು ಒತ್ತಾಯಿಸಿದರು.
ಕೆರೆ ತುಂಬಿದ್ದರಿಂದ ಕೆರೆ ಆವರಣದಲ್ಲಿನ ಅತಿಕ್ರಮಣ ಹಾಗೂ ಪಟ್ಟ ಜಾಗಗಳಲ್ಲಿನ ಮನೆ ಹಾಗೂ ಜಮೀನುಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿತ್ತು, ಜನತೆ ಸಂಕಷ್ಟಕ್ಕೆ ಸಿಲುಕ್ಕಿದ್ದರು. ಕೆರೆಯ ವಿಸ್ತಿರ್ಣವನ್ನು ಸರ್ವೆ ಮಾಡಿ ತಡೆಗೋಡೆ ನಿರ್ಮಿಸುವ ಮೂಲಕ ಅಲ್ಲಿನ ಜನತೆಯ ಹಿತ ಕಾಪಾಡಲು ಶಾಸಕರು, ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ಅಲವತ್ತುಕೊಂಡರು.
ಇನ್ನು ಕೆರೆಯ ಬಳಿ ನಡೆಯುತ್ತಿರುವ ಕಾಮಗಾರಿ ಹೆಸರಿನಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಎಂದಿದೆ, ಆದರೇ ಕೋಡಿ ಬಳಿ ಕಾಮಗಾರಿ ನಡೆಸುತ್ತಿರುವುದ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಗುತ್ತಿಗೆದಾರರ ಬಳಿ ವಿಚಾರಿಸಿದರೆ ನಮಗು ಕೋಡಿ ಕಾಮಗಾರಿಗೂ ಸಂಬಂಧವಿಲ್ಲ, ನಾವು ರಸ್ತೆ ಕಾಮಗಾರಿ ಮಾತ್ರ ಮಾಡುತ್ತೇವೆ ಎಂದವರು ಗ್ರಾಮಸ್ಥರ ವಿರೋಧದ ನಡುವೆಯೂ ಕೆರೆ ಕೋಡಿಯ ಎತ್ತರವನ್ನು ತಗ್ಗಿಸಲು ಒಂದು ಬದಿ ಅಗೆದಿದ್ದಾರೆ ಎಂದರು.
ಐತಿಹಾಸಿಕ ಕೆರೆಯ ಕೋಡಿಯನ್ನು ತಗ್ಗಿಸುವ ಮೂಲಕ ಮೂಲ ಸ್ವರೂಪ ಹಾಗೂ ನೀರು ನಿಲ್ಲುವ ಪ್ರಮಾಣ ಕಡಿಮೆಯಾಗಲ್ಲಿದ್ದು, ಕೆರೆ ನಮ್ಮ ಮೌಲ್ಯ ನಾವು ಅದನ್ನು ಹಾಳು ಮಾಡದೇ ಕಾಪಾಡಿಕೊಂಡು ಹೋಗಬೇಕಿದೆ, ಮಳೆಯಿಂದಾಗಿ ಕೆರೆಯ ಹಿನ್ನಿರಿನ ಮನೆಗಳು ಮುಳುಗಡೆಯಾಗಿದ್ದವು ಅದಕ್ಕೆ ತಡೆಗೋಡೆ ನಿರ್ಮಿಸುವ ಮೂಲಕ ಕೆರೆ ಹಾಗೂ ಕೆರೆ ಅವರಣದ ನಿವಾಸಿಗಳಿಗೆ ನ್ಯಾಯ ದೊರಕಿಸುವ ಕಾರ್ಯ ಮಾಡಬೇಕು ಎನ್ನುವುದು ಗ್ರಾಮಸ್ಥರ ಒತ್ತಾಸೆಯಾಗಿದೆ.
ಈ ಸಂದರ್ಭದಲ್ಲಿ ಮಾಜಿ ತಾಪಂ ಅದ್ಯಕ್ಷ ಈ ವೆಂಕಟೇಶ, ಹಿರಿಯ ಮುಖಂಡ ಬಸಣ್ಣ, ಸಿಆರ್ ಪಿ ಮಾರಣ್ಣ, ರಾಜಣ್ಣ, ಎಚ್,ಎಂ, ಶರಣಪ್ಪ, ಭದ್ರಪ್ಪ, ರಮೇಶ್, ರವಿ, ಪಾಂಡು, ಮಹಾಂತೇಶ್, ತಿಪ್ಪೇಶ್, ಅಂಜಿನಿ, ವಿನೋದ, ಮಂಜುನಾಥ, ಕೃಷ್ಣ ಸೇರಿದಂತೆ ಇತರರಿದ್ದರು.
ಕೆರೆ ಕೋಡಿ ಮಟ್ಟವನ್ನು ತಗ್ಗಿಸಲು ಯಾವುದೇ ಕಾರಣಕ್ಕೂ ಗ್ರಾಮಸ್ಥರು ಬಿಡುವುದಿಲ್ಲ, ನಮ್ಮ ಊರಲ್ಲಿ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದೇವೆ. ಮೊದಲು ಸರ್ವೆ ಕಾರ್ಯ ನಡೆದ ನಂತರ ಮುಂದಿನ ಕ್ರಮಕೈಗೊಳ್ಳಲಿ.
ಈ. ವೇಂಕಟಸ್ವಾಮಿ, ಗ್ರಾಮದ ಮುಖಂಡರು
ಕೆರೆ ಕೋಡಿಯಲ್ಲಿ ರಸ್ತೆ ಕೊಚ್ಚಿಕೊಂಡು ಹೋಗಿದ್ದರಿಂದ ರಸ್ತೆ ನಿರ್ಮಾಣ ಮಾಡಲಿದ್ದೇವೆ ಕೋಡಿಗೆ ಯಾವುದೇ ಧಕ್ಕೆ ಮಾಡದೇ ರಸ್ತೆ ಕಾಮಗಾರಿ ಮಾಡುತ್ತೇವೆ, ಕೋಡಿ ಕಾರ್ಯಕ್ಕೂ ನಮಗೂ ಸಂಬಂಧವಿಲ್ಲ ಸಂಬಂಧಿಸಿದ ಇಲಾಖೆ ಕ್ರಮಕೈಗೊಳ್ಳಲಿದೆ.
ನಾಗನಗೌಡ್ರು, ಸಹಾಯಕ ಅಭಿಯಂತರರು, ಲೋಕಪಯೋಗಿ ಇಲಾಖೆ, ಕೂಡ್ಲಿಗಿ
ಕೆರೆ ತುಂಬಿದಾಗ ಪಟ್ಟ ಜಮೀನುಗಳಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ನಷ್ಟ ಉಂಟು ಮಾಡಿದೆ ಸಂತ್ರಸ್ತರಿಗೆ ಒಂದು ಶಾಶ್ವತ ಪರಿಹಾರ ಹೊದಗಿಸಿಬೇಕು.
ತಿಪ್ಪೇಸ್ವಾಮಿ’ ಸಂತ್ರಸ್ತ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

