ಕೂಡ್ಲಿಗಿ: ಕ್ಷೇತ್ರದ ಗಡಿಭಾಗದ ಹಳ್ಳಿಗರ ಆರೋಗ್ಯ ಸುಧಾರಣೆಗೆ ಅಧ್ಯತೆ ನೀಡುವ ಉದ್ದೇಶದಿಂದ ಮೂಲಕಟ್ಟಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ ಮತ್ತು ಅಗತ್ಯ ಸೌಲಭ್ಯ ಕಲ್ಲಿಸಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 2ಕೋಟಿ ವೆಚ್ಚದ ಉನ್ನತೀಕರಣ ಕಾಮಗಾರಿಗೆ ಶನಿವಾರ ಚಾಲನೆ ಮಾತನಾಡಿದರು.
ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಮತ್ತು ರಾಷ್ಟ್ರೀಯ ಹೆದ್ದಾರಿ 5೦ಕ್ಕೆ ಹೊಂದಿಕೊಂಡಿರುವ ಆಲೂರು ಆಸ್ಪತ್ರೆಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕಿರುವುದು ಅನಿವಾರ್ಯತೆ ಇತ್ತು. ಈಗಾಗಿ ಜಿಲ್ಲಾ ಖನಿಜ ನಿಧಿ 2ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುವುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಕರಣ ಗಣನೀಯವಾಗಿ ಜರುಗುವುದರಿಂದ ಅಗತ್ಯ ಚಿಕಿತ್ಸೆ ಸೌಲಭ್ಯ ಕಲ್ಪಿಸಬೇಕಿದೆ. ಮುಂಬರುವ ದಿನಗಳಲ್ಲಿ ಏಕ್ಸರೇಯಂತಹ ಸೌಲಭ್ಯಕ್ಜೆ ಅಧತ್ಯೆ ನೀಡಲಾಗುವುದು ಎಂದರು. ಈಗಾಲೆ ವೈದ್ಯ ಮತ್ತು ಸಿಬ್ಬಂದಿ ವಸತಿ ನಿಲಯಗಳ ಕಟ್ಟಲು ಕ್ರಮಕೈಗೊಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾನಾಮಡುಗು ಶರಣಬಸವೇಶ್ವರ ದಾಸೋಹಮಠದ ದಾ.ಮ.ಐಮುಡಿ ಶರಣಾರ್ಯರು, ಗ್ರಾಪಂ ಅಧ್ಯಕ್ಷೆ ಉಮಾದೇವಿ, ಉಪಾಧ್ಯಕ್ಷೆ ಚೌಡಮ್ಮ, ಮಾಜಿ ಜಿಪಂ ಸದಸ್ಯ ಕೆ.ಎಂ.ಶಶಿಧರ್, ತಾಪಂ ಮಾಜಿ ಅಧ್ಯಕ್ಷೆ ನಾಗರತ್ನಮ್ಮ ನಿಂಗಪ್ಪ, ತಾಪಂ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಮೆಡಿಕಲ್ ಮಂಜುನಾಥ, ಜಿಲ್ಲಾ ವೈದ್ಯಾಧಿಕಾರಿ ಡಾ.ಶಂಕರನಾಯ್ಕ, ಡಿಎಚ್ಒ ಡಾ.ಪ್ರದೀಪ್, ಜಿಪಂ ಎಇಇ ಮಲ್ಲಿಕಾರ್ಜುನ, ಮಲ್ಲಿಕಾರ್ಜುನ ಮಲಿಯಪ್ಪ, ಪೆನ್ನಪ್ಪ ಸೇರಿದಂತೆ ಗ್ರಾಪಂ ಸದಸ್ಯರು ಇದ್ದರು.
Trending
- ಆರೋಗ್ಯ ಸೇವೆಗಳ ಸದುಪಯೋಗಪಡೆಸಿಕೊಳ್ಳಲು ಕರೆ
- ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇನ್ನಿಲ್ಲ
- ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ; 50ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳಿಗೆ ಬೆಂಕಿ
- ಪತ್ರಕರ್ತರ ಗಿರೀಶ್ ಕುಮಾರ್.ಜಿ ಗೆ ಡಾಕ್ಟರೇಟ್ ಪದವಿ
- ರಂಗಭೂಮಿ ಮಾಧ್ಯಮದಿಂದ ಶಾಂತಿ, ಸಮಾನತೆ ಪಾಠದ ಅನಿವಾರ್ಯತೆ
- ನಾಳೆ ಕೂಡ್ಲಿಗಿಗೆ ಸಿಎಂ, ಡಿಸಿಎಂ
- ಕಾನಹೊಸಹಳ್ಳಿಯಲ್ಲಿ ನಾಳೆ ಮತ್ತು ನಾಡಿದ್ದು ನೀನಾಸಂನಿಂದ ನಾಟಕೋತ್ಸವ
- ಕಾನಾಮಡುಗು ಗ್ರಾಮದಲ್ಲಿ ನೀರಿನಲ್ಲಿಯೇ ಶವ ಸಂಸ್ಕಾರ

