ಕೂಡ್ಲಿಗಿ: ಸಾರ್ವಜನಿಕರ ಸಮಸ್ಯೆಗಳಿಗೆ ಬೆನ್ನು ತೋರಿಸದೇ, ಊರುಗೋಲಾಗಿ ಇರುವುದು ನನ್ನ ಧ್ಯೇಯವಾಗಿದೆ. ಸಮಸ್ಯೆಯನ್ನು ಕೇಳುವುದಕ್ಕೇ ಮೀಸಲಾಗದೇ, ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶವೇ ಪ್ರತಿ ಗ್ರಾಪಂ ವಾರು ನಡೆಯುವ ಈ ಕಾರ್ಯಕ್ರಮವಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಕೂಡ್ಲಿಗಿ ತಾಲೂಕಿನ ಚಿರತಗುಂಡು ಗ್ರಾಮದಲ್ಲಿ ಬುಧವಾರ ನಡೆದ ಮನೆ ಮನೆಗೆ ಶಾಸಕರು, ಮನೆ ಬಾಗಿಲಿಗೆ ಸರಕಾರ ಎನ್ನುವಂಥ ಕನಸಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರದಲ್ಲಿ 216 ಹಳ್ಳಿಗಳಿದ್ದು, ಎಲ್ಲಾ ಹಳ್ಳಿಗಳಿಗೆ ಒಂದೇ ಸಲಕ್ಕೆ ಅಭಿವೃದ್ಧಿ ಆಗಲ್ಲ. ಹೀಗಾಗಿ, ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಪಂ ಕೇಂದ್ರದಲ್ಲಿ ಪ್ರತಿ ವಾರವು ಕಾರ್ಯಕ್ರಮ ಆಯೋಜನೆ ಮಾಡಿ ಹಳ್ಳಿಗಳ ಸಮಸ್ಯೆ ಸ್ಪಂದಿಸಿ ಅವುಗಳ ಪರಿಹಾರಕ್ಕೆ ಯತ್ನಿಸಲಾಗುವುದು. ಚಿರತಗುಂಡು ಗ್ರಾಪಂ ವ್ಯಾಪ್ತಿಯ ಮೂರು ಹಳ್ಳಗಳ ಅಭಿವೃದ್ದಿಗೆ 3.66 ಕೋಟಿ ರೂ ಅನುದಾನದ ನೀಡಲಾಗಿದೆ. ತಾಲೂಕಿನ 136 ಹಳ್ಳಿಗಳಿಗೆ ಅನುದಾನ ಒದಗಿಸಿದ್ದು, ಟೆಂಡರ್ ಹಂತದಲ್ಲಿದೆ ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ಹಳ್ಳಿಗಳಲ್ಲಿ ಸಹೋದರರ ನಡುವೆ ಭೂಮಿ ವ್ಯಾಜ್ಯಗಳಿದ್ದು, ತಹಸೀಲ್ದಾರ್ರು ಪೋತಿ, ಪೋಡಿ ಮೂಲಕ ಪರಿಹರಿಸ ಬೇಕು, ಇಲ್ಲವಾರದೆ ಎಷ್ಟೇ ಅಭಿವೃದ್ಧಿ ಮಾಡಿದರೂ ಪ್ರಗತಿ ಕಾಣುವುದಿಲ್ಲ.
ಇಲ್ಲಿ ಕಡಿಮೆ ಮಳೆ ಬೀಳುವಂಥ ಪ್ರದೇಶವಾಗಿದೆ. ಇಲ್ಲಿನ ಜನರಿಗೆ ಅಭಿವೃದ್ದಿ ಬೇಕು ವಿನಹ ರಾಜಕೀಯ ಬೇಡ, ಎಲೆಕ್ಷನ್ನಲ್ಲಿ ರಾಜಕೀಯ ಮಾಡೋಣ. ಆರ್ಥಿಕ, ಶೈಕ್ಷಣಿಕ ಅಭಿವೃದಿಗೆ ಕೆಲಸ ಮಾಡೋಣ ಎಂದರು.
ಕೆಕೆಆರ್ ಡಿಬಿ ಅನುದಾನದಲ್ಲಿ 150ಕ್ಕೂ ಹೆಚ್ವು ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ಸಾವಿರಕ್ಕೂ ಹೆಚ್ವು ವಿದ್ಯುತ್ ಕಂಬಗಳನ್ನು ಬದಲಾಯಿಸಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಕೆಲಸ ನಿರ್ವಹಿಸುವ ಪಿಡಿಒ, ಬಿಲ್ ಕಲೆಕ್ಡರ್ ಹಳ್ಳಿಗರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ ಎಂದರು.
ಈ ವೇಳೆ ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕರ ಮಾಶಾನ ಮಂಜೂರಾತಿ ಪತ್ರವನ್ನು ವಿತರಿಸಿದರು ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ವಿ.ಕೆ.ನೇತ್ರಾವತಿ, ತಾಪಂ ಇಒ ನರಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು, ಟಿಎಚ್ಒ ಡಾ.ಪ್ರದೀಪ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ರತ್ನಮ್ನಬಸಣ್ಣ, ಗೌಡ್ರುಶಿವಣ್ಣ, ಎಂ.ಬಿ.ಮAಜಣ್ಣ, ದಿಬ್ಬದಹಳ್ಳಿ ಬಸಣ್ಣ, ಜಿ.ಬಿ.ಹಟ್ಟಿ ಬಸಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ವಿ.ತಮ್ಮಣ್ಣ, ಗುಡೇಕೋಟೆ ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಕೆ.ಪಿ.ಪಾಲಯ್ಯ, ನಾಗರಾಜ, ಬೊಮ್ಮಯ್ಯ, ಎಕ್ಕೆಗುಂದಿ ನಾಗರಾಜ, ಎಸ್ಡಿಎಂಸಿ ಅಧ್ಯಕ್ಷೆ ಮಲ್ಲಮ್ಮ, ಗವಿಯಪ್ಪ, ತಳವಾರ ಶರಣಪ್ಪ, ನಿವೃತ್ತ ಇಒ ಬಸಣ್ಣ ಇದ್ದರು.

