ಕೂಡ್ಲಿಗಿ; ಕ್ಷೇತ್ರದ ಪ್ರತಿಯೊಬ್ಬ ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಮನೆ ಮನೆಗು ಶಾಸಕರು ಎನ್ನುವ ವಿನೂತನ ಕಾರ್ಯಕ್ರಮ ಕೈಗೊಂಡಿದ್ದೇವೆ ಎಂದು ಶಾಸಕ ಡಾ ಶ್ರೀನಿವಾಸ್ ಎನ್ ಟಿ ಹೇಳಿದರು.

ತಾಲೂಕಿನ ಸೂಲದಹಳ್ಳಿಯಲ್ಲಿ ಮನೆ ಮನೆಗೆ ನಮ್ಮ ಶಾಸಕರು, ಮನೆ ಬಾಗಿಲಿಗೆ ನಮ್ಮ ಸರ್ಕಾರ ಹಾಗೂ ಶಾಲಾ ಪ್ರಾರಂಭೊತ್ಸವ, ಅಂಗನವಾಡಿ ಶಾಲೆಗಳಿಗೆ ಹಾಗೂ ಇ ಸ್ವತ್ತು ವಿತರಣ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆ ಸೇರಿದಂತೆ ಸರ್ಕಾರದ ಸವಲತ್ತುಗಳು ಜನತೆಗೆ ತಲುಪಿಸುವ ಉದ್ದೇಶವಾಗಿದೆ ಎಂದ ಅವರು, ಕ್ಷೇತ್ರದಲ್ಲಿ ನಿರುದ್ಯೋಗ, ವಸತಿ ಸೌಕರ್ಯಗಳನ್ನು ಹಂತ ಹಂತವಾಗಿ ಬಗೆಹರಿಸಲು ಸೂಕ್ತ ಕ್ರಮಕೈಗೊಳಲಾಗುವುದು ಜತೆಗೆ ರಸ್ತೆ, ಚರಂಡಿ ಮೂಲಭೂತ ಸೌಕರ್ಯಗಳಿಗೆ ಈಗಾಗಲೇ ಸಾಕಷ್ಟು ಅನುಧಾನ ನೀಡಿದ್ದು, ಇನ್ನು ಹೆಚ್ಚಿನ ಕಾಳಜಿವಹಿಸಿ ಅನುದಾನ ನೀಡಲಾಗುವುದು ಎಂದರು.

ಸಿಎಂ ಸಿದ್ದರಾಮಯ್ಯ ಸೇರಿದಂತೆ ಉಸ್ತುವಾರಿ ಸಚಿವರು ನನಗೆ ವಿಶೇಷ ಒತ್ತು ನೀಡಿ ಹೆಚ್ಚಿನ ಅನುದಾನ ನೀಡಿದ್ದಾರೆ. ನವೆಂಬರ್ 9 ರಂದು ಕ್ಷೇತ್ರದ ದಶಕಗಳ ಬೇಡಿಕೆಯಾದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಉದ್ಘಾಟನೆ ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು ಪ್ರಸ್ತಾವಿಕವಾಗಿ ಮಾತನಾಡಿ, ನಮ್ಮ ಕ್ಷೇತ್ರದ ಶಾಸಕರ ಬದ್ದತ್ತೆಯಿಂದಾಗಿ ಕ್ಷೇತ್ರದಲ್ಲಿ ಅಭಿವೃದ್ದಿಯ ಪರ್ವ ಶುರುವಾಗಿದೆ, ಮನೆ ಮನೆಗೂ ಶಾಸಕರು ವಿನೂತನ ಕಾರ್ಯಕ್ರಮ ಶಾಸಕರ ಕನಸಿನ ಕಾರ್ಯಕ್ರಮವಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನೇತ್ರಾವತಿ ವಿ.ಕೆ, ಗ್ರಾಮ ಪಂಚಾಯ್ತಿ ಅದ್ಯಕ್ಷೆ ಬೋವಿ ರತ್ನಮ್ಮ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ನರಸಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಶಾಮಪ್ಪ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಾಪುರ ವೆಂಕಟೇಶ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ತಾಲೂಕು ಅದ್ಯಕ್ಷ ಮಹಮದ್ ಜಿಲಾನ್, ಕಾವಲಿ ಶಿವಪ್, ಎಂ ಗುರುಸಿದ್ದನಗೌಡ, ಮುಖಂಡರಾದ
ಶಶಿಧರ, ಕೆ ಸಿದ್ದಪ್ಪ, ನಾಗರಕಟ್ಟೆ ರಾಜಣ್ಣ, ಅಜ್ಜನಗೌಡ್ರು, ಎಚ್ ರಾಜಪ್ಪ, ಅಗ್ರಹಾರ ದಾರುಕಪ್ಪ, ಖಾಲಿ ಸಿದ್ದಪ್ಪ, ಹುಲಿರಾಜ್, ಸಿದ್ದಬಸಪ್ಪ, ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

