ಕೂಡ್ಲಿಗಿ ; ಶಾಲೆಗಳು ಧಾರ್ಮಿಕ ಕೇಂದ್ರಗಳಾಗದೆ, ಮಕ್ಕಳಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸುವ ಕೇಂದ್ರಗಳಾಗಲಿ ಎಂದು ಶಾಸಕ ಡಾ ಶ್ರೀನಿವಾಸ್ ಎನ್ ಟಿ ಹೇಳಿದರು.
ತಾಲೂಕಿನ ಕಾನಹೊಸಹಳ್ಳಿಯ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ನಡೆಯುತ್ತಿರುವ ಕೆಲ ಘಟನೆಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿವೆ, ಇವುಗಳು ಆಗಬಾರದು ಎಂದರೆ ವೈಜ್ಞಾನಿಕ ಚಿಂತನೆ ಅಗತ್ಯವಾಗಿದೆ. ಮಕ್ಕಳ ನಮ್ಮಂತೆ ಆಗಬಾರದು ಉತ್ತಮ ಪ್ರಜೆಗಳಾಗಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ೭ ಕೆಪಿಎಸ್ಸಿ ಶಾಲೆಗಳನ್ನು ಮಂಜೂರು ಮಾಡಲಾಗಿದೆ , ಅದರ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ದೊರಯಲಿದೆ ಎಂದರು.
ಸಹಾಯಕ ಆಯುಕ್ತರಾದ ವಿವೇಕಾನಂದ ಮಾತನಾಡಿ, ಸರ್ಕಾರಿ ಶಾಲಾ- ಹಾಸ್ಟೇಲ್ಗಳಲ್ಲಿ ಇತ್ತೀಚೆಗೆ ಗುಣಮಟ್ಟ ಹೆಚ್ಚಾಗಿದೆ. ಈ ಭಾಗದಲ್ಲಿ ಶಿಕ್ಷಣ ಆರೋಗ್ಯಕ್ಕೆ ಒತ್ತು ನೀಡಲಾಗಿದೆ , ಸೀಟ್ ಬೇಡಿಕೆ ಹೆಚ್ಚಿಸಲು ಶಾಸಕ ಶ್ರೀನಿವಾಸ್ ಹೇಳಿದ್ದರು, ಅದರಂತೆ ಮಾಡಲಾಗಿದೆ ಎಂದ ಅವರು, ಶಿಕ್ಷಣದಿಂದ ವಂಚಿತರಾನ್ನಾಗಿ ಮಾಡದೇ ಮಕ್ಕಳ ಕನಸನು ಈಡೇರಿಸಿ ಪೋಷಿಸಿ ಸೇವೆ ಸಲ್ಲಿಸುವಂತಾಗಲಿ ಎಂದು ಪೋಣಕರಿಗೆ ಕೀವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು ಪ್ರಸ್ತಾವಿಕವಾಗಿ ಮಾತನಾಡಿ, ಮೈಲೇಶ್ ಬೇವೂರು ಪ್ರಸ್ತಾವಿಕವಾಗಿ ಮಾತನಾಡಿ, ತಾಲೂಕಿನ ಎಲ್ಲಾ ಶಾಲೆಗಳಿಗೆ ಸಾಂಸ್ಕೃತಿಕ ನೆಲಗಟ್ಟನ್ನು ಒದಗಿಸಲು ಇಂತಹ ವೇದಿಕೆಗಳು ಸಹಕಾರಿಯಾಗಲಿವೆ ಎಂದರು.
ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ ಎಂ ಶಶಿಧರ ಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ ಜಿ ಸಿದ್ದನಗೌಡ್ರು, ತಹಶೀಲ್ದಾರ್ ನೇತ್ರಾವತಿ ವಿಕೆ, ಗ್ರಾಮ ಪಂಚಾಯ್ತಿ ಉಪಾಧ್ತಕ್ಷೆ ಲಕ್ಷ್ಮಿ, ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಬ ಕರಣಂ, ಮುಖಂಡರಾದ ಸೂಲದಹಳ್ಳಿ ಸಿದ್ದಣ್ಣ, ಗುರುಸಿದ್ದನಗೌಡ್ರು, ಪಿಆರ್ಇಡಿ ಎಇಇ ಮಲ್ಲಿಕಾರ್ಜುನ, ಅಜ್ಜನಗೌಡ, ಬಣವಿಕಲ್ಲು ಯರ್ರಿಸ್ವಾಮಿ, ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿ ಹರ್ಷವರ್ಧನ, ನಿವೃತ್ತ ಶಿಕ್ಷಕ ತಳವಾರ ಶರಣಪ್ಪ, ಇಸಿಒ ನಿಂಗಪ್ಪ, ಸಮನ್ವಯಧಿಕಾರಿ ಜಗದೀಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೇಂಕಟೇಶ್ ಇತರರಿದ್ದರು.

