ಕೂಡ್ಲಿಗಿ: ಕ್ಷೇತ್ರದ ಜನರಲ್ಲಿನ ಮೌಡ್ಯತೆ ಹಾಗೂ ಶಿಕ್ಷಣದ ಕೊರತೆಯನ್ನು ದೂರಮಾಡಲು ಪೂಜಾರಹಳ್ಳಿ ಸೇರಿದಂತೆ ಕ್ಷೇತ್ರದಲ್ಲಿ ೩ ಕೆಪಿಎಸ್ಸಿ ಶಾಲೆಗಳನ್ನು ಮಂಜೂರು ಮಾಡಲಾಗಿದೆ ಎಂದು ಶಾಸಕ ಡಾ ಶ್ರೀನಿವಾಸ್ ಎನ್ ಟಿ ಹೇಳಿದರು.
ತಾಲೂಕಿನ ಪೂಜಾರಹಳ್ಳಿಯಲ್ಲಿ ಮನೆ ಮನೆಗು ಶಾಸಕರು, ಮನೆ ಬಾಗಿಲಿಗೆ ಶಾಸಕರು ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಣದ ಕೊರತೆಯಿಂದಾಗಿ ನಮ್ಮ ಭಾಗದಲ್ಲಿ ಬಾಲ್ಯ ವಿವಾಹ ಹಾಗೂ ಪೋಕ್ಸೊ ಪ್ರಕರಣಗಳು ಹೆಚ್ಚಾಗಿವೆ ಇವುಗಳನ್ನ ಮನಃಗಂಡು ಕ್ಷೇತ್ರದಲ್ಲಿ ಕೆಪಿಎಸ್ಸಿ ಶಾಲೆಗಳ ತೆರೆಯಲು ಅಧಿವೇಶನದಲ್ಲಿ ಧ್ವನಿ ಎತ್ತಿದ್ದೆ, ಕೂಡಲೇ ಶಿಕ್ಷಣ ಸಚಿವರ ನೇತೃತ್ವದಲ್ಲಿ ಸಭೆ ಕರೆದು ರಾಜ್ಯದಾದ್ಯಾಂತ ಶಾಲೆಗಳನ್ನು ಮಂಜೂರು ಮಾಡಿದೆ ಎಂದರು.
ರಸ್ತೆ, ಚರಂಡಿ ಅಭಿವೃದ್ದಿ ಕಾರ್ಯಗಳು ತಾತ್ಕಾಲಿಕ ಅಷ್ಟೇ, ಕ್ಷೇತ್ರದ ಜ್ವಲಂತ ಸಮಸ್ಯೆಗಳಿಂದ ಮುಕ್ತಿಯಾಗಬೇಕಾದರೆ ನೀರು ಮತ್ತು ವಿದ್ಯುತ್ ಪೂರೈಕೆ ಶಾಶ್ವತ ಪರಿಹಾರ ಈ ನಿಟ್ಟಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಮಹತ್ತರ ಯೋಜನೆ ಜಾರಿಗೆ ತರಲಾಗಿದೆ. ತಿಪ್ಪೇಹಳ್ಳಿ ಕೆರೆ ಅಭಿವೃದ್ದಿಗೆ ೨ ಕೋಟಿ ನೀಡಲಾಗಿದೆ, ಬಹುಬೇಡಿಕೆಯ ಕಾತ್ರಿಕೆಹಟ್ಟಿಯ ಸೇತುವೆ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭವಾಗಿದೆ ಎಂದರು.
ಚುನಾವಣಾ ಸಮಯದಲ್ಲಿ ಮಾತ್ರ ರಾಜಕೀಯ ಮಾಡಿ, ಅಭಿವೃದ್ದಿ ವಿಚಾರದಲ್ಲಿ ಬೇಡ. ಪ್ರತಿ ಹಳ್ಳಿಯ ಸಮಸ್ಯೆಗಳ ಬಗ್ಗೆ ಮಾಹಿತಿ ಇದೆ, ೨೧೬ ಹಳ್ಳಿಗಳು ಕ್ಷೇತ್ರದಲ್ಲಿದ್ದು. ಎಲ್ಲಾ ಹಳ್ಳಿಗಳಿಗೂ ಒಟ್ಟಿಗೆ ಅಭಿವೃದ್ದಿಯಾಗಲ್ಲ. ಹಂತ ಹಂತವಾಗಿ ಅಭಿವೃದ್ದಿ ಮಾಡಲಾಗುವುದು ತಮ್ಮಲ್ಲೇರ ಸಹಕಾರ ಇರಲಿ ಎಂದರು.
ಸರಕಾರದ ಸೌಲಭ್ಯಗಳಿಗೆ ಗಂಗಕಲ್ಯಾಣ, ನೇರಸಾಲ ಅರ್ಜಿ ಸಲ್ಲಿಸಿದವರಿಗೆ ಉಚಿತವಾಗಿ ಸಿಗಲಿದ್ದು, ದಲ್ಲಾಳಿಗರು, ಬ್ರೋಕರ್ಗಳಂತ ಮಧ್ಯವರ್ತಿಗಳಿಗೆ ಯಾರೂ ಹಣ ನೀಡಿ ತೊಂದರೆ ಪಡಬೇಡಿ, ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದರು.
ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕರ ಮಾಶಾನ ಮಂಜೂರಾತಿ ಪತ್ರವನ್ನು ವಿತರಿಸಿದರು ಕಾರ್ಯಕ್ರಮದಲ್ಲಿ ತಾಪಂ ಇಒ ನರಸಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು, ಸರಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ಜ್ಯೋತಿ ವೆಂಕಟೇಶ್, ಉಪಾಧ್ಯಕ್ಷೆ ದುರುಗಮ್ಮ, ಮಾಜಿ ಜಿಪಂ ಸದಸ್ಯ ಕೆ.ಎಂ.ಶಶಿಧರ್, ಗುರುಸಿದ್ದನಗೌಡ, ಜಿ.ಓಬಣ್ಣ, ತಳವಾರ ಶರಣಪ್ಪ, ನಿವೃತ್ತ ಇಒ ಬಸಣ್ಣ, ಬಿಸಿಎಂ ಅಧಿಕಾರಿ ಶ್ಯಾಮಪ್ಪ, ಪಿಡಿಬ್ಲುಡಿ ಎಇಇ ಕೆ.ನಾಗನಗೌಡ, ಜಿಪಂ ಎಇಇ ಮಲ್ಲಿಕಾರ್ಜುನ್, ಟಿಎಚ್ಓ ಡಾ.ಪ್ರದೀಪ, ಪಿಡಿಒ ನಾರಾಯಣಪ್ಪ, ಗ್ರಾಪಂ ಸದಸ್ಯರಾದ ಪಾಪಮ್ಮ, ರವೀಂದ್ರ, ವಿಜಯ ಕುಮಾರ್ಗೌಡ ಇದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

