ಕೂಡ್ಲಿಗಿ: ಬೈಕ್ ಹಿಂಬದಿಗೆ ಮತ್ತೊಂದು ಬೈಕ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಕೂಡ್ಲಿಗಿ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನಡೆದಿದೆ.
ಕೂಡ್ಲಿಗಿಯ 16 ನೇ ವಾರ್ಡಿನ ಕುಂಬಾರ ಓಣಿಯ ಮಜಾರ್(30) ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಕಲ್ಲಹಳ್ಳಿ ತಾಂಡಾದ ಮಹೇಶ್(26) ಮೃತಪಟ್ಟ ಸವಾರರಾಗಿದ್ದು.
ಪಟ್ಟಣದ ಹೊರ ವಲಯದಲ್ಲಿ ಮ್ಯಾಕನಿಕ್ ಶಾಪ್ ನಡೆಸುತ್ತಿದ್ದ ಮಜಾರ್ ತನ್ನ ಬೈಕಿನಲ್ಲಿ ಹೆದ್ದಾರಿ-50ರ ಕೊಟ್ಟೂರು ಬೈಪಾಸ್ ರಸ್ತೆಯ ಮುಖಾಂತರ ಹೋಗುತ್ತಿದ್ದಾಗ, ಚಿತ್ರದುರ್ಗ ಕಡೆಯಿಂದ ಸರ್ವಿಸ್ ರಸ್ತೆಯ ಮುಖಾಂತರ ಅತಿ ವೇಗ ಹಾಗೂ ಅಜಾಗಾರುಕತೆಯಿಂದ ತನ್ನ ಬೈಕ್ ಚಾಲನೆ ಮಾಡಿಕೊಂಡ ಬಂದ ಮಹೇಶ ಮಜಾರ್ ನ ಬೈಕ್ ಹಿಂಬದಿಗೆ ಡಿಕ್ಕಿಹೊಡೆಸಿದ್ದಾನೆ.
ಇದರಿಂದ ಮಜಾರ್ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮಹೇಶ ಬಳ್ಳಾರಿ ಬೀಮ್ಸ್ ಗೆ ಹೋಗುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

